Sunday, May 18, 2008

ಕಡತ ಸಾಗಣೆ ಒಡಂಬಡಿಕೆ - ೧

ಇದು ಹೆಣಿಕೆಗಳಲ್ಲಿ ಎಣಿಯಿಂದ ಎಣಿಗೆ ಕಡತಗಳನ್ನು ಸಾಗಿಸುವುದಕ್ಕಾಗಿ ಬಳಕೆಯಲ್ಲಿರುವ ಬಹಳ ಜನಪ್ರಿಯವಾದ ಒಡಂಬಡಿಕೆ. ಹಲವು ಹೆಣಿಕೆಯ ಒಡಂಬಡಿಕೆಗಳಂತೆ ಇದು ಕೊಳ್ವ-ಊಳಿಗಿ ಆಧಾರಿತ. ಕಸಾಒ ಟೀ.ಸೀ.ಪಿ/ ಅಯ್.ಪಿ (Transport control protocol - ಸಾರಿಗೆ ಒಡಂಬಡಿಕೆ, internet protocol - ಅಂತರ ಹೆಣಿಕೆ ಒಡಂಬಡಿಕೆ ) ಮೇಲೆ ನಡೆಯುತ್ತದೆ.

ಊಳಿಗಿಯು ೨೧ ನೇ ರೇವಿನಲ್ಲಿ ಕಿವಿಗೊಟ್ಟು ಕಸಾಒ ಕೊಳ್ವರಿಂದ ಒಳಬರುವ ಸಿಲುಕು ಕೋರಿಕೆಗಾಗಿ ಕಾಯುತ್ತದೆ. ಒಂದು ಕೊಳ್ವನಿಂದ ಬಂದ ಸಿಲುಕು ಕೋರಿಕೆಯನ್ನು ಊಳಿಗಿಯು ಸ್ವೀಕರಿಸಬೇಕು. ಆಗ ಕೊಳ್ವ ಹಾಗೂ ಊಳಿಗಿಯ ನಡುವೆ ಒಂದು ಸಿಲುಕು ಏರ್ಪಡುತ್ತದೆ. ಈ ಸಿಲುಕನ್ನು ಅಂಕೆಯ ಕಾಲುವೆ ಎನ್ನಲಾಗುತ್ತದೆ. ಏಕೆಂದರೆ ಇದರಲ್ಲಿ ಬರಿ ಕಸಾಒ ಅಪ್ಪಣೆಗಳು ಹಾಗೂ ಅವುಗಳ ಮಾರ್ನುಡಿಗಳು ಮಾತ್ರ ಹರಿಯುತ್ತವೆ. ನಿಜವಾದ ಮಾಹಿತಿ ಅಲ್ಲ. ಸಿಲುಕು ಸ್ವೀಕರಿಸಿದ ಕೂಡಲೆ, ಊಳಿಗಿಯು 'ಸಿಲುಕು ತೇರ್ಗಡೆ'ಯೆಂಬ ಸಂದೇಶವನ್ನು ಅದೇ ಸಿಲುಕು (ಕಾಲುವೆ) ಮೂಲಕ ತಿಳಿಸುತ್ತದೆ. ಇದಕ್ಕೆ ಕಸಾಒ ಮಾರ್ನುಡಿ ಎನ್ನುತ್ತಾರೆ. ಈಗ ಒಂದು ಕಸಾಒ ನೆರೆವು ಏರ್ಪಡುವುದಕ್ಕೆ ಕೊಳ್ವನು ಬಳಕೆಗಾರನ ಹೆಸರು ಹಾಗೂ ಅವನ ತೇರ್ಪದವನ್ನು ಊಳಿಗಿಗೆ ತಿಳಿಸಬೇಕು. ಕೊಳ್ವನು ಇದೇ ಕಾಲುವೆಯಲ್ಲಿ 'user' ಹಾಗೂ ಅದಾದ ಮೇಲೆ 'passwd' ಎಂಬ ಎರಡು ಅಪ್ಪಣೆಗಳ ಮೂಲಕ ಈ ಮಾಹಿತಿಯನ್ನು ಕೊಡುತ್ತದೆ. ಇವೆರಡೂ ಸರಿಯಿದ್ದು ಊಳಿಗಿಯಿಂದ ಸ್ವೀಕ್ರುತಗೊಂಡ ಮೇಲೆ ಕಸಾಒ ನೆರೆವು (FTP session) ತೊಡಗುತ್ತದೆ (ಪ್ರಾರಂಭ).

ಮಾಹಿತಿ ಕಳುಹಿಸಬೇಕಾದ್ದಲ್ಲಿ, ಒಂದು ಹೊಸ ಕಾಲುವೆಯನ್ನು (ಬೇರೊಂದು ರೇವಿನಲ್ಲಿ) ತೆರೆಯಲಾಗುತ್ತದೆ. ಅಂಕೆಯ ಕಾಲುವೆಯು, ನೆರೆವು ಮುಗಿಯುವವರೆಗೂ ಇರುತ್ತದೆ. ಆದರೆ ಮಾಹಿತಿ ಕಾಲುವೆಯನ್ನು ಮಾಹಿತಿಯ ಸಾಗಣೆಯಾದ ಕೂಡಲೇ ಮುಚ್ಚಲಾಗುತ್ತದೆ. ಮತ್ತೆ, ಅಂಕೆಯ ಕಾಲುವೆಯಲ್ಲಿ ಮಾಹಿತಿ/ ಕಡತ ಸಾಗಣೆಯ ಕೋರಿಕೆ ಹರಿದು ಬಂದಾಗ ಹೊಸ ಮಾಹಿತಿ ಕಾಲುವೆ ಏರ್ಪಡುತ್ತದೆ. ಸಾಗಣೆ ಮುಗಿದ ಕೂಡಲೇ ಮುಚ್ಚಲಾಗುತ್ತದೆ.

ಕಡತ ಸಾಗಣೆ ಒಡಂಬಡಿಕೆಯನ್ನು ಕೆಳಗಿನ ಚಿತ್ರದಲ್ಲಿ ಕೊಡಲಾಗಿದೆ.




ಒಬ:
ಒಡಂಬಡಿಕೆ ಬಗೆಗಾರ. ಊಳಿಗಿ ಇಲ್ಲವೇ ಕೊಳ್ವರ ಕಡೆಗಳಲ್ಲಿ ಒಡಂಬಡಿಕೆಯನ್ನು ಬಗೆದು ಕಡತ ಸಾಗಣೆಯನ್ನು ನಿಯಮಿಸುತ್ತದೆ. ಕೊಳ್ವ ಹಾಗೂ ಊಳುಗಿಗಳ ಒಬಗಳು ಬೇರೆ ಬೇರೆಯಾಗಿದ್ದು ಆಯಾ ಕಡೆಗಳಲ್ಲಿ ಬೇರೆ ಬೇರೆ ಪಾತ್ರಗಳನ್ನು ವಹಿಸುತ್ತವೆ.

ಊಳಿಗಿ ಒಬ (ಒಡಂಬಡಿಕೆ ಬಗೆಗಾರ) :
ಊಳಿಗಿ ಒಡಂಬಡಿಕೆ ಬಗೆಗಾರವು 21ನೇ ರೇವಿನಲ್ಲಿ ಕಿವಿಗೊಟ್ಟು ಕೇಳುತ್ತದೆ. ಕೊಳ್ವ ಒಬದಿಂದ ಸಿಲುಕು ಕೋರಿಕೆ ಬಂದಾಗ ಅದರೊಂದಿಗೆ ಸಿಲುಕನ್ನು ಸ್ಥಾಪಿಸುತ್ತದೆ. ಕೊಳ್ವ ಒಬದಿಂದ ಕಸಾಒ ಅಪ್ಪಣೆಗಳನ್ನು ಪಡೆದು, ಅದಕ್ಕೆ ಮಾರ್ನುಡಿಗಳನ್ನು ಕಳುಹಿಸಿ, ಉಳುಗಿ ಮಾಹಿತಿ ಸಾಗಣೆ ನಡೆಯನ್ನು ನಿಯಮಿಸುತ್ತದೆ.

ಊಳಿಗಿ ಮಾಸಾನ (ಮಾಹಿತಿ ಸಾಗಣೆ ನಡೆ):
ಊಳಿಗಿಯ ಎಡೆಯಲ್ಲಿ ಈ ನಡೆ ಅಥವಾ ನಡೆಗಳ ಗುಂಪು ಕೊಳ್ವ ಮಾಸಾನದ ಒಡನಾಡಿತನದೊಂದಿಗೆ ಕಡತಗಳ ಸಾಗಣೆ ಮಾಡುತ್ತದೆ.

ಕೊಳ್ವ ಒಬ (ಒಡಂಬಡಿಕೆ ಬಗೆಗಾರ):
ಕೊಳ್ವನ ಕಡೆಯಲ್ಲಿ ಒಡಂಬಡಿಕೆ ಬಗೆಗಾರ.

ಕೊಳ್ವ ಮಾಸಾನ (ಮಾಹಿತಿ ಸಾಗಣೆ ನಡೆ):
ಕೊಳ್ವನ ಕಡೆಯಲ್ಲಿ ಮಾಹಿತಿ ಸಾಗಣೆ ನಡೆ.

ಮುಂದಿನ ಬರಹದಲ್ಲಿ ಚುರುಕು ಕಸಾಒ (active FTP) ಹಾಗೂ ತೂಗು ಕಸಾಒ (passive FTP) ಬಗ್ಗೆ ಬರೆಯುವೆ.

----------------------------------------------------------------------------------------------------------

ಪದತಿಳಿವು (Glossary)


ಹೆಣಿಕೆ: network
ಎಣಿ: computer
ಕಡತ: file
ಕಡತ ಸಾಗಣೆ ಒಡಂಬಡಿಕೆ: file transfer protocol; ಒದಂಬಡಿಕೆ = protocol.
ಕೊಳ್ವ: client (ಬೆಲೆ ಕೊಟ್ಟು ಕೊಂಡುಕೊಳ್ಳುವ ಎಂಬ ಅರ್ಥದಿಂದ ಈ ಪದ ಬಳಸಿಲ್ಲ. ಕೊಳ್ ಎಂದರೆ ತೆಗೆದುಕೊಳ್ಳು, ಪಡೆ ಎಂಬ ಅರ್ಥ ಇದೆ. ಊಳಿಗ-ಸಿವೆಯನ್ನು ಪಡೆಯುವವ ಎಂಬ ಅರ್ಥದಲ್ಲಿ ಬಳಕೆ).
ಊಳಿಗಿ: server; ಊಳಿಗ = ಸೇವೆ =>ಕೊಳ್ವ-ಊಳಿಗಿ = client-server.
ಸಾರಿಗೆ ಒಡಂಬಡಿಕೆ: TCP (Transprot Control Protocol)
ಅಂತರಹೆಣಿಕೆ ಒಡಂಬಡಿಕೆ: IP (Internet Protocol)
ರೇವು: port
ಕಿವಿಗೊಡು: listen
ಸಿಲುಕು: conect (v), connection (n).
ಅಂಕೆ = control; ಅಂಕೆಯ ಕಾಲುವೆ= control channel.
ಅಪ್ಪಣೆ = command (n)
ಮಾರ್ನುಡಿ = reply; ಕಸಾಒ ಮಾರ್ನುಡಿ = FTP reply.
ಮಾಹಿತಿ = data, information (data ಪದಕ್ಕೆ ಸರಿಯಾದ ಪದ ನನಗೆ ಸಿಕ್ಕಿಲ್ಲ. ಸಿಕ್ಕರೆ ತಿಳಿಸಿ).
ನೆರೆವು = session.
ಬಳಕೆಗಾರ = user
ತೇರ್ಪದ = password
ಬಗೆ = interpret; ಬಗೆಗಾರ = interpreter.
ಒಡಂಬಡಿಕೆ ಬಗೆಗಾರ = protocol interpreter.
ನಡೆ = process; ಮಾಹಿತಿ ಸಾಗಣೆ ನಡೆ = data transfer process.
ಸಿಲುಕು ತೇರ್ಗಡೆ = connection successful
ಕೊಳ್ವನ ಕಡತ ಏರ್ಪಾಟು: client file system
ಊಳುಗಿಯ ಕಡತ ಏರ್ಪಾಟು: server file system

7 comments:

Manjunath Narasimhaiah said...

Sandeep wonderful article. I have one suggestion, as a starter i would still not be able to get the big picture as this article is not taking me to basics of OSI layers. If can write an article on that and then make it a prerequisite before reading this it will be lot helpful.

ಕನ್ನಡtech said...

ಮಂಜು, ನೀನು ಹೇಳಿರೋದು ನಿಜ. ಖಂಡಿತ ಮಾಡೋಣ, ಮಾಡಬೇಕು. OSI stack ಬಗ್ಗೆ ಮಾತಾಡಿದರೆ ಮತ್ತೆ ಅದರ basicsಗೆ ಹೋಗ ಬೇಕಾಗುತ್ತೆ. ಮತ್ತೆ, ಅದರ basics. ಕೊನೆಗೆ ನಾವು ಎಣಿ ಶಾಸ್ತ್ರಕ್ಕೆ (computer science) basics ಆದ discrete maths, graph theory, finite automata, data structures ಮತ್ತೆ ಹೆಣಿಕೆ (network)ಗಳಿಗೆ ಮತ್ತು ಎಣಿಗಳಿಗೆ basics ಆದ electronics ಇತರೆ ವಿಷಯಗಳ ಬಗ್ಗೆ ಬರೆಯಬೇಕಾಗುತ್ತದೆ. ಮೂಲ ಹುಡುಕಿಕೊಂಡು ಕೆಳಗೆ ಹೋದರೆ ಅದಕ್ಕೆ ಕೊನೆಯೇ ಇಲ್ಲ. ಎಲ್ಲೋ ಒಂದು ಕಡೆ ನಿಂತು ಕೆಲವು assumptionಗಳನ್ನು ಮಾಡಿಕೊಂಡು ಇರೋ ವಿಷಯ ಹೇಳಬೇಕಾಗುತ್ತೆ.

ಆದರೆ ನೀನು ಹೇಳೋದರಲ್ಲಿ ಏನೂ ತಪ್ಪಿಲ್ಲ. ಯಾವುದೇ ಒಂದು ವಿಷಯದ ಮೇಲೆ ಬರೆದರೆ ಅದರ ಮೂಲದ ವಿಷಯದ ಬಗ್ಗೆಯೂ ಬರೆಯಬೇಕಾಗುತ್ತೆ. ಮೂಲ ವಿಷಯಗಳ ಬಗ್ಗೆ ಬರಹಗಳು ಬಂದು ಅವುಗಳ ಬಗ್ಗೆ ಸಕ್ರಿಯ ಮಾತುಕತೆ, ಭಾಗವಹಿಸುವಿಕೆ ಆಗಬೇಕು. ಇದಕ್ಕೆಲ್ಲ ಸಾವಿರಾರು ಅಲ್ಲದಿದ್ದರೂ ನೂರಾರು ಕನ್ನಡಿಗರು ಮುಂದಾಗಬೇಕು. ಮುಂದೆ ಎಷ್ಟು ಮಂದಿ ನಮ್ಮ ಒಡಗೂಡ್ತಾರೆ ನೋಡೋಣ.

ಸದ್ಯಕ್ಕೆ ಕಡತ ಸಾಗಣೆ ಒಡಂಬಡಿಕೆ ವಿಷಯ ಮುಗಿದ ಮೇಲೆ ಎಣಿ ಶಾಸ್ತ್ರಕ್ಕೆ basic ವಿಷಯಗಳಲ್ಲಿ ಒಂದಾದ 'Discrete Maths' ಬಗ್ಗೆ ಬರಿ ಬೇಕು ಅಂತ ಇದ್ದೀನಿ.

Unknown said...

sandeepa...masth aagidhe kano blog..nan geLeyarigella kalsiddini...avru odirthaare
good work....keep it flowing.

ವಿವೇಕ್ ಶಂಕರ್ said...

computer = ಎಣ್ಣುಕ

ತುಂಬಾ ಚನ್ನಾಗಿದೆ ಈ ಬರಹ ಹೀಗೆ ಮುಂದುವರಿಸಿ.

ತಿಳಿಗಣ್ಣ said...

ತುಂಬಾ ಚನ್ನಾಗಿದೆ. ನೀವು ಕಟ್ಟುವ ಹೊಸಪದಗಳನ್ನು ಬರಹ ಪದನೆರಿಕೆ (ನಿಗಂಟಿಗೆ) ಸೇರಿಸಿ.

ಇಂತಿ
ಮಹೇಶ ಬೋಗಾದಿ
ಅಂಕೆಗಾರ, ಬರಹ ಪದನೆರಿಕೆ.

ಕನ್ನಡtech said...

@ತಿಳಿಗಣ್ಣ

ನಿಮ್ಮ ಮೆಚ್ಚುಗೆಗೆ thanxu! ಬರಹ ಪದನೆರಕೆಗೆ ಹಾಗೂ ವಿಕ್ಷನರಿಗೆ ಸಮಯ ಸಿಕ್ಕಾಗ ಖಂಡಿತ ಹೊಸ ಪದಗಳನ್ನು ಸೇರಿಸುತ್ತೇನೆ.

ನಾಗರಾಜ ಸಾಠೆ said...

ಒಡಂಬಡಿಕೆ ಎಂದರೆ ಒಪ್ಪಂದವಲ್ಲವೇ??